Saturday, August 6, 2016

About Sri Bhavahara Ganapathi Temple in Kannada

||ಓಂ||                                                                                                                     ||ಶುಭಮಸ್ತು||


ಶ್ರೀ ಭವಹರ ಗಣಪತಿ ದೇವಸ್ಥಾನ
ಆನಂದ್ ರಾವ್ ವೃತ್ತ,
ಸುಬೇದಾರ್ ಛತ್ತರಂ ರಸ್ತೆ,
ಬೆಂಗಳೂರು - 560 009
ಕರ್ನಾಟಕ
ದೂರವಾಣಿ: 080 22257283
ಸಮಯ - ಬೆಳಿಗ್ಗೆ 6:30 ರಿಂದ 12:30 
ಸಂಜೆ 5:30 ಯಿಂದ 8:30 ರವರೆಗೆ


ವಕ್ರ ತುಂಡ ಮಹಾ ಕಾಯ ಸೂರ್ಯ ಕೋಟಿ ಸಮಪ್ರಭ|
ನಿರ್ವಿಘ್ನಮ್ ಕುರು ಮೇ ದೇವಾ ಸರ್ವ ಕಾರ್ಯೇಷು ಸರ್ವದಾ||



ಭವಹಾರ ಗಣಪತಿಯನ್ನುವ ಅರ್ಥ ಎಲ್ಲರ ಕಷ್ಟಗಳನ್ನು ಪರಿಹರಿಸುವವನು. ದೇವಸ್ಥಾನದ ಭಕುತರಲ್ಲಿ ನಾನು ಒಬ್ಬ, ನನಗೆ ತಿಳ್ಳಿದ ಮಟ್ಟಿಗೆ ಈ ದೇವಸ್ಥಾನಕೆ ಸುಮಾರು 260 ರಿಂದ 300 ವರ್ಷಗಳ ಇತಿಹಾಸವಿದೆ, ನನ್ನ ಕೋರಿಕೆಯು ಇಲ್ಲಿ ನೆರವೇರಿದೆ

ಇಲ್ಲನ ಗಣಪತಿ ವಿಗ್ರಹವು ಉದ್ಭವವಾದದು, ಮೊದುಲು ಗಣಪತಿಯು ದೇವಸ್ಥಾನದ ನೆಲಭಾಗದಲ್ಲಿ ಇತ್ತು, ಇಲ್ಲಿನ ಪ್ರಧಾನ ಅರ್ಚಕರಾದ ಶ್ರೀ. ಶಂಕರ್ ಶಾಸ್ತ್ರೀಯವರು ಭಕ್ತಾದಿಗಳ ಸಹಾಯದಿಂದ1980-81 ರಲ್ಲಿ ಜೀರ್ಣೋಧ್ಹಾರಗಳಿಸಿ ನೂತನ ದೇವಾಲಯವನ್ನು ನಿರ್ಮಿಸಿ ಗಣೇಶನ ವಿಗ್ರಹವನ್ನು ಭಕ್ತಾದಿಗಳ ದರ್ಶನಕೆ ಅನುಕೂಲವಾಗುವಂತೆ 14-06-1987 ರಂದು ಪುನರ್ ಪ್ರತಿಷ್ಟಾಪನೆ ಮಾಡಲಾಗಿತ್ತು, ಶಂಕರ್ ಶಾಸ್ತ್ರಿಗಳೊಂದಿಗೆ ಇವರ ಮಕಳಾದ ಶ್ರೀ. ವೆಂಕಟೇಶ್ ಶಾಸ್ತ್ರೀ ಮತ್ತು ಶ್ರೀ. ರಾಜೇಶ್ ಶಾಸ್ತ್ರೀ ದೇವರ ಸೇವೆ ನಡೆಸಿಕೊಂಡು ಬರುತ್ತಿದ್ದರೆ. 

ಈ ದೇವಸ್ಥಾನದಲ್ಲಿರುವ ಗಣಪತಿಯ ಬಲ ಭಾಗದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ, ಶ್ರೀ ನಂದೀಶ್ವರ, ಶ್ರೀ ಆಂಜನೇಯಸ್ವಾಮಿ ಮತ್ತು ಗಣಪತಿಯ ಎಡಭಾಗದಲ್ಲಿ ಶ್ರೀ ಪಾರ್ವತಿ ತಾಯಿಯ ತೊಡೆಯ ಮೇಲೆ ಶ್ರೀ ಸುಬ್ರಮಣ್ಯಸ್ವಾಮಿಯ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ (ಇಲ್ಲಿ ಗಣೇಶನನ್ನು ಪರಿವಾರದ ಸಮೇತ ದರುಶನ ಮಾಡಬಹುದು).

ಈ ದೇವಾಲಯದಲ್ಲಿ ಪ್ರತಿ ನಿತ್ಯ ಬೆಳ್ಳಿಗೆ ಪಂಚಾಮೃತ ಅಭಿಷೇಕ ನಡೆಯುತ್ತದೆ ಮತ್ತು ವಿಶೇಷವಾಗಿ ವಣ್ಣ ಹಣ್ಣುಗಳ ಅಭಿಷೇಕ ನಡೆಯುತ್ತದೆ, ಚಕುಲ್ಲಿ, ಕೊಡಬಳೆ, ನಿಪ್ಪಟ್ಟು, ಖಜಾಯ, ಮೋದಕ, ಕಡಬು, ಪಂಚಕಜ್ಜಾಯ ನೈವೇದ್ಯ, ಅನ್ನ ನೈವೇದ್ಯವನ್ನು ನಡೆಸಲಾಗುತ್ತದೆ, ವರುಷಕೆ ಎರಡು ಬಾರಿ ಚಂದ್ರಮಾನ ಯುಗಾದಿ ಮತ್ತು ಗಣೇಶ ಚತುರ್ಥಿಯಂದು ವಿಶೇಷವಾಗಿ ಶ್ರೀ ಗಂಧದ ತೈಲಾಭಿಷೇಕ ನಡೆಸಲಾಗುತ್ತದೆ.

ಇಲ್ಲಿ ಗಣಪನಿಗೆ ಹೆಚ್ಚಿನ ದಿನಗಳ ಕಾಲ ಎಂದರೆ 365 ದಿನಗಳಲ್ಲಿ ಸುಮಾರು 300 ದಿನಗಳ ಕಾಲ ಗಣೇಶನನ್ನು ಬೆಣ್ಣೆ ಅಲಂಕಾರದಲ್ಲಿ ನೋಡಬಹುದು, ಅದಕಾಗಿ ಕೆಲ ಭಕ್ತಾದಿಗಳು ಈ ದೇವರನ್ನು ಬೆಣ್ಣೆ ಗಣಪನೆಂದೇ ಕರೆಯುತ್ತಾರೆ, ಬಾಕಿ 65 ದಿನಗಳಲ್ಲಿ ಬೇರೆ ಬೇರೆ ರೀತಿಯ ಅಲಂಕಾರಗಳು ನೋಡಬಹುದು. ಉದಾಹರಣೆಗೆ:  ಶ್ರೀ ಸ್ವಾಮಿಗೆ ಅರಿಶಿನ ಅಲಂಕಾರ, ಕುಂಕುಮ ಅಲಂಕಾರ, ವೀಭೂತಿ ಅಲಂಕಾರ, ಶ್ರೀ ಗಂಧದ ಅಲಂಕಾರ, ಹೂವಿನ ಅಲಂಕಾರ, ವಿವಿಧ ರೀತಿಯ ವಣ್ಣ ಹಣ್ಣುಗಳ ಅಲಂಕಾರ, ಹಣ್ಣುಗಳ ಅಲಂಕಾರ, ತರಕಾರಿಗಳ ಅಲಂಕಾರ, ಧಾನ್ಯಗಳ ಅಲಂಕಾರ, ನಾಣ್ಯದ ಅಲಂಕಾರ, ದುಡ್ಡಿನ ಅಲಂಕಾರ (ನೋಟು, ದುಡ್ಡು) , ಸಿಹಿ ಲಡ್ಡು ಅಲಂಕಾರ, ಖೋವಾ ಅಲಂಕಾರ, ಬುತ್ತಿ ಅಲಂಕಾರ (ಮೊಸರನ್ನ), ಮುಸುಕಿನ ಜೋಳ ಅಲಂಕಾರ (ಕಾರ್ನ್), ಹತ್ತಿ ಅಲಂಕಾರ (ಕಾಟನ್), ಪುಸ್ತಕ, ಸೀಸದ ಕಡ್ಡಿ (ಪೆನ್ಸಿಲ್), ಲೇಖನಿ (ಪೆನ್) ಮತ್ತು ಹಲವು ಬರವಣಿಗೆ ಮತ್ತು ಲೇಖನ ಸಾಮಗ್ರಿಗಳ ಅಲಂಕಾರ, ಚಾಕಲೇಟ್ ಅಲಂಕಾರ, ತೆಂಗಿನ ಕಾಯಿ ಅಲಂಕಾರ, ವಸ್ತ್ರ ಅಲಂಕಾರ, ವೀಳೇದೆಲೆ ಅಲಂಕಾರ, ಬೆಟ್ಟದ ನೆಲ್ಲಿಕಾಯಿ ಅಲಂಕಾರ, ಮುತ್ತಿನ ಮಣಿ ಅಲಂಕಾರ (ಪರ್ಲ್), ಕವಡೆ ಅಲಂಕಾರ (ಕೌರಿ ಶೆಲ್) ಇನ್ನು ಹಲವು ಬಗೆ ಬಗೆಯ ಅಲಂಕಾರಗಳು ಕಾಣಬಹುದು.

ಪ್ರತಿ ತಿಂಗಳು ಹುಣಿಮೆಯ ದಿನದಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಸಂಕಷ್ಟಹರ ಚತುರ್ಥಿಯ ದಿನದಂದು ಸಂಕಷ್ಟಹರ ಪೂಜೆಯನ್ನು ನಡೆಸಲಾಗುತ್ತದೆ.
ಈ ದೇವಸ್ಥಾನ ಬೆಂಗಳೂರಿನ ಹೃದಯ ಭಾಗದಲಿರುವುದರಿಂದ ಇಲ್ಲಿ ಚಿತ್ರತಂಡದವರು, ರಾಜಕೀಯ ವ್ಯಕ್ತಿಗಳು, ಸರ್ಕಾರೀ ಉದ್ಯೋಗಿಗಳು, ಸ್ವಯಂ ವ್ಯಾಪಾರಸ್ಥರು ಮತ್ತು ಸಾಮಾನ್ಯ ಜನರು ತಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಳ್ಳಲು ದೇವರಲ್ಲಿ ಮೂರೇ ಹೋಗುತ್ತಾರೆ ಮತ್ತು ಭಕ್ತಾದಿಗಳು ತಮ್ಮ ವಾಹನಗಳಿಗೆ ಪೂಜೆ ಮಾಡಿಸುತ್ತಾರೆ.

ಪ್ರತಿ ವರ್ಷ ಶ್ರೀ ಗಣೇಶ ಚತುರ್ಥಿಯ ಅಂಗವಾಗಿ ಈ ದೇವಸ್ಥಾನದ ಆವರಣದಲ್ಲಿ ಗಣೇಶನ ಮಣ್ಣಿನ ವಿಗ್ರಹವನ್ನು ಪ್ರತಿಷ್ಠಾಪಿಸಿ ಹೋಮ ಹವಾನಗಳು ನಡೆಯುತ್ತದೆ ಭಕ್ತಾದಿಗಳ ನೆರವಿನಿಂದ ಹನೊಂದು ದಿನಗಳ ಕಾಲ ಸುಮಾರು ಐದರಿಂದ ಆರು ಸಾವಿರ ಜನರಿಗೆ ಮಧ್ಯಾಹ್ನ ಅನ್ನ ಪ್ರಸಾದ ವಿನಿಯೋಗವನ್ನು  ಸ್ವೀಕರಿಸುತ್ತಾರೆ.

ನನಗೆ ಸಿಕ್ಕಿದ ಕೆಲವು ಛಾಯಾ ಚಿತ್ರಗಳು ಈ ಪುಟದಲ್ಲಿದೆ 











































No comments:

Post a Comment